ವಿಳಾಸ :   #147/4, 'ಲಕ್ಷ್ಮೀನಿವಾಸ', ಸಂಜಯನಗರ ಮೇನ್ ರೋಡ್, ಸಂಜಯನಗರ, ಬೆಂಗಳೂರು - 560094.
ವಿಶೇಷ ತೀರ್ಥ ಯಾತ್ರೆ

ಕರ್ನಾಟಕದ ನಾನಾ ಭಾಗಗಳಿಂದ ಬೆಂಗಳೂರಿಗೆ ಒಟ್ಟಾಗಿ ರಾಷ್ಟ್ರ ಜಾಗ್ರತಿ ಅಭಿಯಾನ ಸಮಿತಿ 15-02-2023 ರಿಂದ 7 ದಿನಗಳ ವಿಶೇಷ ತೀರ್ಥಯಾತ್ರೆ ಆಯೋಜಿಸಿ ಪ್ರಥಮ ತಂಡದಲ್ಲಿ 277 ಯಾತ್ರಿಕರು ಅಯೋಧ್ಯೆ, ಪ್ರಯೋಗ್ ರಾಜ್, ಗಯಾ, ವಾರಾಣಸಿ, ಅಮೃತ ಸರ್ , ನವದೆಹಲಿಗಳನ್ನು ಬೆಂಗಳೂರಿನಿಂದ ಮುಂಜಾನೆ 6 ಗಂಟೆಯಿಂದ ವಿಮಾನದಲ್ಲಿ ತೆರಳಿ ಲಕ್ನೋ ತಲುಪಿ 45 ಆಸನಗಳುಳ್ಳ 6 ಎ .ಸಿ ಬಸ್‌ಗಳಲ್ಲಿ ಅಯೋಧ್ಯೆ, ಪ್ರಯೋಗ್ ರಾಜ್, ಗಯಾ, ವಾರಣಾಸಿಗಳಲ್ಲಿ ಪ್ರವಾಸ ಮುಗಿಸಿ ಶಿವರಾತ್ರಿಯಂದು ಕಾಶಿ ವಿಶ್ವನಾಥನ ದರ್ಶನ ಮಾಡಿ ಗಂಗಾರತಿ ನೋಡಿ,ಆನಂದಪಟ್ಟು,ಅಮೃತಸರಕ್ಕೆ ರೈಲಿನಲ್ಲಿ 19ರ ಮುಂಜಾನೆ ಪ್ರಯಾಣ ಬೆಳಸಿ ಸ್ವರ್ಣಮಂದಿರ,ವಾಗಾ ಗಾಡಿಯಲ್ಲಿ ನಮ್ಮ ಸೈನಿಕರ ವಿಶೇಷ ಕವಾಯತ್ ನ್ನು ವೀಕ್ಷಿಸಿ ದೇಶಪ್ರೇಮ ಮೆರೆದು ನಂತರ ರೈಲಿನಲ್ಲಿ ನವದೆಹಲಿಗೂ ಭೇ ಟಿ ಕೊಟ್ಟು ಪ್ರಮುಖ ಸ್ಥಳಗಳನ್ನು ವೀಕ್ಷಿಸಿ 22ರ ಮುಂಜಾನೆ ಬೆಂಗಳೂರಿಗೆ ವಿಮಾನದಲ್ಲಿ ಹಿಂತಿರುಗುವ ವಿಶೇಷ ತೀರ್ಥಯಾತ್ರೆಯನ್ನು ರಾಷ್ಟ್ರ ಜಾಗ್ರತಿ ಅಭಿಯಾನ ಸಮಿತಿ ಯಾವುದೇ ಜಾತಿ,ಭೇದಗಳಿಲ್ಲದೆ ಒಟ್ಟಾಗಿ ಸಾಮರಸ್ಯದ ತೀರ್ಥಯಾತ್ರೆಯನ್ನು ಆಯೋಜಿಸಿದೆ.

ರಾಜ್ಯ ಜಾಗೃತಿ ಅಭಿಯಾನ ಸಮಿತಿ ಆಯೋಜಿಸುವ ಈ ತೀರ್ಥಯಾತ್ರೆಯ ವಿಶೇಷತೆಗಳು