ವಿಶೇಷ ತೀರ್ಥ ಯಾತ್ರೆ

OUR PROGRAMS

ಸೇವೆ

ಸಮರ್ಪಣೆ

ಸತ್ಸಂಗ

ತೀರ್ಥಯಾತ್ರೆ ಮೊದಲ ತಂಡ - 7 ದಿನಗಳ ತೀರ್ಥಯಾತ್ರೆ (15-02-2023 ರಿಂದ 22-02-2023)

ಕರ್ನಾಟಕದ ನಾನಾ ಭಾಗಗಳಿಂದ ಬೆಂಗಳೂರಿನಲ್ಲಿ ಒಟ್ಟಾಗಿ ರಾಷ್ಟ್ರ ಜಾಗೃತಿ ಅಭಿಯಾನ ಸಮಿತಿ 15-02-2023ರಿಂದ 7 ದಿನಗಳ ವಿಶೇಷ ತೀರ್ಥಯಾತ್ರೆ ಆಯೋಜಿಸಿ ಪ್ರಥಮ ತಂಡದಲ್ಲಿ 277 ಯಾತ್ರಿಕರು ಅಯೋಧ್ಯೆ, ಪ್ರಯಾಗ್‌ರಾಜ್, ಗಯಾ, ವಾರಣಾಸಿ, ಅಮೃತಸರ್, ನವದೆಹಲಿಗಳನ್ನು ಬೆಂಗಳೂರಿನಿಂದ ಮುಂಜಾನೆ 6 ಗಂಟೆಯಿಂದ ವಿಮಾನದಲ್ಲಿ ತೆರಳಿ ಲಕ್ನೋ ತಲುಪಿ 45 ಆಸನಗಳುಳ್ಳ 6 ಎ.ಸಿ. ಬಸ್‌ಗಳಲ್ಲಿ ಅಯೋಧ್ಯೆ, ಪ್ರಯಾಗ್‌ರಾಜ್, ಗಯಾ, ವಾರಣಾಸಿಗಳಲ್ಲಿ ಪ್ರವಾಸ ಮುಗಿಸಿ ಶಿವರಾತ್ರಿಯಂದು ಕಾಶಿ ವಿಶ್ವನಾಥನ ದರ್ಶನ ಮಾಡಿ ಗಂಗಾರತಿ ನೋಡಿ, ಆನಂದಪಟ್ಟು ನಮಿಸಿ, ಅಮೃತಸರಕ್ಕೆ ರೈಲಿನಲ್ಲಿ 19ರ ಮುಂಜಾನೆ ಪ್ರಯಾಣ ಬೆಳೆಸಿ ಸ್ವರ್ಣಮಂದಿರ, ವಾಘಾ ಗಡಿಯಲ್ಲಿ ನಮ್ಮ ಸೈನಿಕರ ವಿಶೇಷ ಕವಾಯತ್‌ನ್ನು ವೀಕ್ಷಿಸಿ ದೇಶಪ್ರೇಮ ಮೆರೆದು ನಂತರ ರೈಲಿನಲ್ಲಿ ನವದೆಹಲಿಗೂ ಭೇಟಿ ಕೊಟ್ಟು ಪ್ರಮುಖ ಸ್ಥಳಗಳನ್ನು ವೀಕ್ಷಿಸಿ 22ರ ಮುಂಜಾನೆ ಬೆಂಗಳೂರಿಗೆ ವಿಮಾನದಲ್ಲಿ ಹಿಂತಿರುಗುವ ವಿಶೇಷ ತೀರ್ಥಯಾತ್ರೆಯನ್ನು ರಾಷ್ಟ್ರ ಜಾಗೃತಿ ಅಭಿಯಾನ ಸಮಿತಿ ಯಾವುದೇ ಜಾತಿ, ಭೇದಗಳಿಲ್ಲದೇ ಒಟ್ಟಾಗಿ ಸಾಮರಸ್ಯದ ತೀರ್ಥಯಾತ್ರೆಯನ್ನು ಆಯೋಜಿಸಿದೆ

ರಾಷ್ಟ್ರ ಜಾಗೃತಿ ಅಭಿಯಾನ ಸಮಿತಿ ಆಯೋಜಿಸಿರುವ ಈ ತೀರ್ಥಯಾತ್ರೆಯ ವಿಶೇಷತೆಗಳು

1. ನಮ್ಮ ಈ ತೀರ್ಥಯಾತ್ರೆಯಲ್ಲಿ ತಟ್ಟೆ, ಲೋಟ, ಚಮಚ, ಯಾತ್ರಿಕರೇ ಪ್ರತ್ಯೇಕವಾಗಿ ತಂದು ಎಲ್ಲೂ ಕಸ ಹಾಕದೇ ಸ್ವಚ್ಛತೆಗೆ ಆದ್ಯತೆ ಕೊಟ್ಟು ಸ್ವಚ್ಛ ಭಾರತ ಅಭಿಯಾನಕ್ಕೆ ಕೈಜೋಡಿಸುವೆವು.
2. ನಾವೆಲ್ಲರೂ ಒಟ್ಟಾಗಿ ಕೆಲವು ದೇವಸ್ಥಾನಗಳ ಸ್ವಚ್ಛತೆ ಮಾಡುವೆವು, ನಮ್ಮ ತಂಡದ ಹಿರಿಯರ ಮಾರ್ಗದರ್ಶನದಲ್ಲಿ ಕಿರಿಯರೆಲ್ಲರೂ ಸ್ವಚ್ಛತೆ ಕಾರ್ಯಕ್ರಮದಲ್ಲಿ ಕೈಗೊಳ್ಳುವರು.
3. ನಾವೆಲ್ಲರೂ ಹೊಸ ಬಟ್ಟೆಗಳನ್ನು ತಂದು ಬಡವರಿಗೆ ದಕ್ಷಿಣೆ ಕೊಟ್ಟು ಧಾನ ಮಾಡಿ ನಮಿಸುವೆವು.
4. ಎಲ್ಲಾ ಕಡೆ ರಾಷ್ಟ್ರ ಜಾಗೃತಿ ಅಭಿಯಾನ ಸಮಿತಿ ಆಯ್ಕೆ ಮಾಡಿರುವ ಹತ್ತು ಗೀತೆಗಳನ್ನು ಹಾಡುವೆವು, ನೃತ್ಯ ಪ್ರದರ್ಶನ ಮಾಡುವೆವು, ಭಜನೆ, ದೇವರನಾಮ ಪಠಿಸುವೆವು.
5. ಹೆಚ್ಚು ಸೇವಾ ಕಾರ್ಯಕ್ಕೆ ಮತ್ತು ಸ್ವಚ್ಛತೆಗೆ ಒತ್ತು ಕೊಟ್ಟು ತಪಸ್ಸಿನಂತೆ ತೀರ್ಥಯಾತ್ರೆ ಮಾಡುವೆವು.
6. ನಮ್ಮ ಈ ಗುಂಪಿನಲ್ಲಿ ಇರುವ ಕಿರಿಯರು ಹಿರಿಯರ ಸೇವೆ ಮಾಡುವರು.
7. ಗೌರವ ತಂದು ಕೊಡುವಂತಹ ಭಾರತೀಯ ವೇಷ ಭೂಷಣಗಳನ್ನು ಮಾತ್ರ ಧರಿಸುವೆವು.
8. ನದಿ ಸ್ನಾನ, ಧ್ಯಾನ, ಪೂಜೆ, ಜಪ, ತಪ, ಆಹಾರಕ್ಕಾಗಿ ಪ್ರಸಾದ ಸೇವನೆ ಮಾಡುವವು. ಸಭ್ಯತೆಗೆ ಮೊದಲ ಆದ್ಯತೆ ನೀಡುವೆವು.
9. ಕರ್ನಾಟಕದ ಗೌರವ ಘನತೆ, ಸಂಸ್ಕೃತಿ, ಸಂಪ್ರದಾಯ ನಾವೆಲ್ಲರೂ ಒಟ್ಟಾಗಿ ನಾಲ್ಕು ರಾಜ್ಯಗಳಲ್ಲೂ ಪರಿಚಯಿಸುವೆವೆ.
10. ಈ ತೀರ್ಥಯಾತ್ರೆ ಪ್ರತಿಯೊಬ್ಬರಿಗೂ ಪುಣ್ಯ ಸಂಪಾದನೆಯ ಯಾತ್ರೆಯಾಗಿರುತ್ತದೆ, ಹಾಗಾಗಿ ಹೆಚ್ಚು ಹೆಚ್ಚು ಪುಣ್ಯ ಕಾರ್ಯಗಳನ್ನು ಕೈಗೊಳ್ಳುವೆವು.

ಈ ತೀರ್ಥಯಾತ್ರೆಯಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು ಕೆಳಗಿನ ವಾಟ್ಸಪ್ಪ್ ನಂಬರ್ ಗೆ ಸಂಪರ್ಕಿಸಬಹುದು.

+919606071264