ಮೊದಲ ವರ್ಷ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ 75 ದೇಶಗೀತೆಗಳ ಆನ್ ಲೈನ್ ಸ್ಪರ್ಧೆ ನಡೆಸಲಾಯಿತು. ಸುಮಾರು 32
ಲಕ್ಷಕ್ಕಿಂತಲೂ ಹೆಚ್ಚು ಜನರು ದೇಶ ವಿದೇಶಗಳಿಂದ ಹಾರೈಸಿ, ಆಶೀರ್ವದಿಸಿ, ಭಾಗವಹಿಸಿದರು. ಆಯ್ದ 75 ಗೀತೆಗಳನ್ನೂ ಹಾಡಿದ್ದವರಿಗೆ
ಕೀರ್ತಿಶೇಷ ಶ್ರೀ ಚಂದ್ರಶೇಖರ ಭಂಡಾರಿ ಜಿ ರವರ ಉಪಸ್ಥಿತಿಯಲ್ಲಿ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಮೊದಲ ವರ್ಷದ ಸಮಾರೋಪ
ಸಮಾರಂಭ ಆಯೋಜಿಸಿ ನಗದು ಬಹುಮಾನಗಳು ಮತ್ತು ಎಲ್ಲರಿಗೂ ಪ್ರಶಂಸನಾ ಪತ್ರಗಳನ್ನು ನೀಡಿ 12 ಗಂಟೆಗಳ ಕಾಲ ಸಾಂಸ್ಕೃತಿಕ
ಕಾರ್ಯಕ್ರಮಗಳನ್ನೂ ನಡೆಸಲಾಯಿತು.
ಎರಡನೇ ವರ್ಷಕ್ಕೆ ಸಾಮೂಹಿಕ ಗೀತ ಗಾಯನ ಸಮರ್ಪಣೆ ಮತ್ತು ಸ್ಪರ್ಧೆಗೆ ವಿಶೇಷವಾಗಿ 10 ಗೀತೆಗಳನ್ನು ಆಯ್ಕೆ ಮಾಡಿ ಸಾಹಿತ್ಯ,
ಕಲಿಕಾ ಮಾದರಿ ದ್ವನಿಮುದ್ರಿಕೆ ಬಿಡುಗಡೆ ಮಾಡಲಾಯಿತು. ಗೀತೆಗಳ ಸಾಹಿತ್ಯದ ಪುಸ್ತಕ ಮೊದಲನೇ ಹೂಗುಚ್ಛ ಭಾಗ -1ಕ್ಕೆ ಸ್ವತಃ ಶ್ರೀ
ಚಂದ್ರಶೇಖರ ಭಂಡಾರಿ ಜಿ ಮುನ್ನುಡಿ ಬರೆದುಕೊಟ್ಟು ಮುಕ್ತ ವೇದಿಕೆಯಲ್ಲಿ ಉಪಸ್ಥಿತರಿದ್ದು ದಿಕ್ಸೂಚಿ ಭಾಷಣ ಮಾಡಿ ಹರಸಿ
ಆಶೀರ್ವದಿಸಿದ್ದರು. ಸಮಿತಿಯ ಅಧ್ಯಕ್ಷರಾಗಿ ಉಚ್ಛನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶ್ರೀ ಎನ್. ಕುಮಾರ್ ಮತ್ತು
ಗೌರವಾಧ್ಯಕ್ಷರಾಗಿ ಮೈಸೂರು ಸಂಸ್ಥಾನದ ರಾಜ ಮನೆತನದ ಶ್ರೀ ಯದುವೀರ್ ಒಡೆಯರ್ ರವರ ಮಾರ್ಗದರ್ಶನದಲ್ಲಿ ಸಮಿತಿಯ ಕಾರ್ಯ
ಪ್ರಾರಂಭವಾಗಿದೆ. ಸಮಿತಿಯ ಕಾರ್ಯದರ್ಶಿಯಾಗಿ ಶ್ರೀ ಹೆಚ್. ಜಿ .ಚಂದ್ರಶೇಖರ, ಹೆಸರಾಂತ ಕೈಗಾರಿಕೋದ್ಯಮಿ ಮತ್ತು
ಕೋಶಾದ್ಯಕ್ಷರಾಗಿ ಡಾll ಆರ್. ಎಲ್. ರಮೇಶ್ ಬಾಬು ಹೆಸರಾಂತ ಕೈಗಾರಿಕೋದ್ಯಮಿ ಕೈಜೋಡಿಸಿದ್ದಾರೆ.
1) ಆಯ್ಕೆ ಮಾಡಿರುವ 25 ಗೀತೆಗಳ ಜೊತೆಗೆ 75 ಗೀತೆಗಳನ್ನು ಸೇರಿಸಿ ಒಟ್ಟು 100 ಗೀತೆಗಳನ್ನು ಮಾತ್ರ ಸಾಹಿತ್ಯ ಸಮೇತವಾಗಿ ಪೋಸ್ಟ್
ಮಾಡಬೇಕು.
2) ಅನ್ಯಾನ್ಯ ಗುಂಪಿನಲ್ಲಿ ಹಿಂದೆ ಯಾವಾಗಲೋ, ಎಲ್ಲೋ ಪೋಸ್ಟ್ ಮಾಡಿದ್ದ ಗೀತೆಗಳ ವೀಡಿಯೋವನ್ನು ಪುನಃ ಪೋಸ್ಟ್ ಮಾಡಿದರೆ ಮಾನ್ಯತೆ
ಇರುವುದಿಲ್ಲ.
3) ಸಾಹಿತ್ಯ ಶುದ್ಧವಾಗಿ ರಾಗ, ತಾಳಕ್ಕೆ ಕೃತಿ ಅನುಗುಣವಾಗಿರುವ ಗೀತೆಗಳು, ಕೇಳುವುದಕ್ಕೂ ಇಂದು. ಚೆನ್ನಾಗಿ ಕಲಿತು ಹಾಡಿ ಪೋಸ್ಟ್
ಮಾಡಿರಿ, ಸಾಹಿತ್ಯ ನೋಡಿಕೊಂಡು ಹಾಡಬೇಡಿ, ಓದಬೇಡಿ.
4) ನವೆಂಬರ್ 1, 2023 ರಿಂದ ಪ್ರಾರಂಭಿಸುವ ಈ ಸ್ಪರ್ಧೆಯಲ್ಲಿ ತಾವುಗಳು ಪ್ರತಿ ವಾರಕ್ಕೆ 5 ಗೀತೆಗಳನ್ನು ಮಾತ್ರ ಪೋಸ್ಟ್ ಮಾಡಲು
ಅವಕಾಶವಿರುತ್ತದೆ.
5) ತಮ್ಮನ್ನು ತಾವು ಗುರುತಿಸಿಕೊಳ್ಳುವಂತಹ ವೀಡಿಯೊಗಳಿಗೆ ಮಾತ್ರ ಮಾನ್ಯತೆ. ತೆರೆಯ ಮರೆಯ ಹಾಡುಗಾರರಿಗೆ ಮಾನ್ಯತೆ
ಇರುವುದಿಲ್ಲ.
6) ಪಕ್ಕವಾದ್ಯವಿಲ್ಲದ ಶುದ್ಧ ಗಾಯನಕ್ಕೆ ಹೆಚ್ಚು ಆದ್ಯತೆ, ಮಾನ್ಯತೆ ಅಥವಾ ಪಕ್ಕವಾದ್ಯದಿಂದಲೇ ನುಡಿಸಿದರೂ ಪರವಾಗಿಲ್ಲ.
7) ಕನಿಷ್ಠ ತಮ್ಮ ಸುತ್ತಮುತ್ತಲಿನ 10 ಮಕ್ಕಳೊಂದಿಗೆ ಅಥವಾ ಬಂಧುಗಳೊಂದಿಗೆ ಅಥವಾ ಸ್ನೇಹಿತರೊಡನೆ ಸೇರಿ ರಾಷ್ಟ್ರ ಜಾಗೃತಿ ಅಭಿಯಾನ
ಸಮಿತಿ ಸಾಮೂಹಿಕ ಗೀತ ಗಾಯನಕ್ಕೆ ಈ ವರ್ಷ ಆಯ್ಕೆ ಮಾಡಿರುವ 25 ಗೀತೆಗಳ ಜೊತೆಗೆ ಕಳೆದ ವರ್ಷದ 10 ಗೀತೆಗಳನ್ನು ಸೇರಿಸಿ ಗುಂಪಿನಲ್ಲಿ
ಈ ಒಟ್ಟು 35 ಗೀತೆಗಳನ್ನು ಮಾತ್ರ ಹಾಡಿ ಸಮರ್ಪಣೆ ಮಾಡಿದರೆ ಸಾಕು. ಮಾನ್ಯತೆಯೂ ಹೆಚ್ಚು ಸ್ಪರ್ಧೆಯಲ್ಲಿ ಪೂರ್ಣ
ಭಾಗವಹಿಸಿದಂತೆ.
8) ಪ್ರತಿಯೊಬ್ಬರು ಚೆನ್ನಾಗಿ ಕೇಳಿ ಕಲಿತು ಹಾಡಿ ಸ್ಪರ್ಧೆಯಲ್ಲಿ ಭಾಗವಹಿಸಿ, ಆತುರ, ಆತಂಕ ಬೇಡ.
9) ತಮ್ಮ ಸ್ನೇಹಿತರು ಬಂಧುಗಳನ್ನು ಈ ಗುಂಪಿನಲ್ಲಿ ಸೇರಿಸಿ ತಮ್ಮ ಗಾಯನಕ್ಕೆ ಸಿಗುವಂತಹ ಮೆಚ್ಚುಗೆಯನ್ನು ಹೆಚ್ಚಿಸಿಕೊಳ್ಳಲು
ಪ್ರಯತ್ನಪಡಿ.
10) ಯಾವುದೇ ಆಡ್ಡಮಾರ್ಗದಲ್ಲಿ, ಈ ಸ್ಪರ್ಧೆಗೆ ಸಂಬಂಧವಲ್ಲದ, ಕುಚೇಷ್ಟೆಗಳಿಗೆ, ಆಸಭ್ಯತೆಯ ಪೋಸ್ಟ್‌ಗಳನ್ನು ಯಾರೂ ಕೂಡ ಪೋಸ್ಟ್
ಮಾಡಬಾರದು. ಮಾಡಿದರೆ ಅವರನ್ನು ನಿರ್ಬಂಧಿಸಲಾಗುವುದು.