ರಾಷ್ಟ್ರ ಜಾಗೃತಿ ಅಭಿಯಾನ
ದೇಶಭಕ್ತಿ , ನಮ್ಮ ಸಂವಿಧಾನ , ನಮ್ಮ ಸಂಸ್ಕೃತಿ , ನಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಜಾಗೃತಿ ಅಭಿಯಾನ
ನಮ್ಮ ಬಗ್ಗೆಸಮಾನ ಮನಸ್ಕರ ವೇದಿಕೆ ಇದಾಗಿದೆ. ಸುಮಾರು 14 ವರ್ಷಗಳ ದಿಂದೆ ಕೀರ್ತಿಶೇಷ ಶ್ರೀ ಹರ್ಷಾನಂದ ಸ್ವಾಮೀಜಿ, ರಾಮಕೃಷ್ಣ ಆಶ್ರಮ, ಬೆಂಗಳೂರು. ಮತ್ತು ಕೀರ್ತಿಶೇಷ ಶ್ರೀ ನ. ಕೃಷ್ಣಪ್ಪನವರ ಸೂಚನೆಯಂತೆ ರಾಷ್ಟ್ರ ಗೀತೆ ಕುರಿತಾಗಿ ಸಮೀಕ್ಷೆಯ ಕಾರ್ಯ ನಡೆಸಲಾಯಿತು. ಸರಳ 3 ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆಯಲಾಯಿತು
ಹಿರಿಯರಾದ ಕೀರ್ತಿಶೇಷ ಶ್ರೀ ಚಂದ್ರಶೇಖರ ಭಂಡಾರಿ, ಕೀರ್ತಿ ಶೇಷ ಶ್ರೀ ಹರಿಭಾವು ವಝೆ ಮತ್ತು ಕೆಲವು ಗಣ್ಯರು ಹಿರಿಯರು. ಉಪಸ್ಥಿತಿಯಲ್ಲಿ ವರದಿಯ ವಿಷಯ ಚರ್ಚಿತವಾಯಿತು. ಶಾಲಾ ದಿನಗಳಲ್ಲಿ ಮಕ್ಕಳು ಕಲಿಯುತ್ತಾರೆ, ಹಾಡುತ್ತಾರೆ. ನಂತರದಲ್ಲಿ ಪ್ರಾಮುಖ್ಯತೆ ಕಡಿಮೆಯಾಗುತ್ತಾ ಹೋಗುವ ವಾತಾವರಣವಿದೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಯಾರೋ ಒಬ್ಬರು ಹಾಡುತ್ತಾರೆ, ಉಳಿದವರು ಯಾಂತ್ರಿಕವಾಗಿ ನಿಲ್ಲುತ್ತಾರೆ. ಎದ್ದು ನಿಲ್ಲದೆ ಗೌರವ ಸೂಚಿಸದವರೂ ಕಾಣಸಿಗುತ್ತಾರೆ. ಹೀಗಾಗಿ ಜಾಗೃತಿ ಮೂಡಿಸುವ ಅಭಿಯಾನದ ಅಗತ್ಯತೆ ಇದೆಯೆಂಬ ಅಭಿಪ್ರಾಯ ಮೂಡಿಬಂದುದರ ಫಲವಾಗಿ ರಚಿತವಾದುದೇ ರಾಷ್ಟ್ರ ಜಾಗೃತಿ ಅಭಿಯಾನ ಸಮಿತಿ ವೇದಿಕೆ.
ರಾಷ್ಟ್ರ ಗೀತೆ ಯಾವುದು ಎಂಬ ಪ್ರಶ್ನೆಗೆ 2403 ಜನ ಮಾತ್ರ ಸರಿಯಾದ ಉತ್ತರ ಕೊಟ್ಟಿದ್ದರು.
ರಾಷ್ಟ್ರ ಗೀತೆ ಹಾಡಲು ಹೇಳಿದರೆ 68℅ ಜನ ನಿರಾಕರಿಸಿ ಇದರಿಂದ ಏನು ಲಾಭ, ಇತ್ಯಾದಿ ಮರು ಪ್ರಶ್ನೆ ಕೇಳಿದ್ದರು.
ರಾಷ್ಟ್ರ ಗೀತೆ ಹಾಡಿದ್ದವರು ಕೇವಲ 218 ಜನ, 12 ರಿಂದ 30 ವರ್ಷದ ವಯಸ್ಸಿನ ಅಂತರದವರು.
ಕೀರ್ತಿಶೇಷ ಶ್ರೀ ಚಂದ್ರಶೇಖರ ಭಂಡಾರಿ ಜಿ 75 ದೇಶಭಕ್ತಿ ಗೀತೆಗಳನ್ನು ಆಯ್ಕೆ ಮಾಡಿ ಸ್ಪರ್ಧೆ, ಸಮರ್ಪಣೆ, ಸಂವಾದ ಎಂಬ ಮಾರ್ಗಗಳ ಮೂಲಕ ಜನಜಾಗೃತಿ ಮೂಡಿಸಿ ಎಂದು ಅಭಿಪ್ರಾಯ ನೀಡಿದರು. ಕೀರ್ತಿಶೇಷ ಶ್ರೀ ಹರಿಭಾವು ವಝೆ ಸಮಿತಿಯ ಗುರಿ ನಮ್ಮ ದೇಶ, ನಮ್ಮ ಸಂವಿಧಾನ, ನಮ್ಮ ಸಂಸ್ಕೃತಿ, ನಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಭಾರತೀಯರೆಲ್ಲರಲ್ಲಿ ಜನಜಾಗೃತಿ ಮಾಡಿಸುವುದಾಗಿರಲಿ ಎಂದು ಸಲಹೆ ನೀಡಿದರು .
ಮೊದಲ ವರ್ಷ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ 75 ದೇಶಗೀತೆಗಳ ಆನ್ ಲೈನ್ ಸ್ಪರ್ಧೆ ನಡೆಸಲಾಯಿತು. ಸುಮಾರು 32 ಲಕ್ಷಕ್ಕಿಂತಲೂ ಹೆಚ್ಚು ಜನರು ದೇಶ ವಿದೇಶಗಳಿಂದ ಹಾರೈಸಿ, ಆಶೀರ್ವದಿಸಿ, ಭಾಗವಹಿಸಿದರು. ಆಯ್ದ 75 ಗೀತೆಗಳನ್ನೂ ಹಾಡಿದ್ದವರಿಗೆ ಕೀರ್ತಿಶೇಷ ಶ್ರೀ ಚಂದ್ರಶೇಖರ ಭಂಡಾರಿ ಜಿ ರವರ ಉಪಸ್ಥಿತಿಯಲ್ಲಿ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಮೊದಲ ವರ್ಷದ ಸಮಾರೋಪ ಸಮಾರಂಭ ಆಯೋಜಿಸಿ ನಗದು ಬಹುಮಾನಗಳು ಮತ್ತು ಎಲ್ಲರಿಗೂ ಪ್ರಶಂಸನಾ ಪತ್ರಗಳನ್ನು ನೀಡಿ 12 ಗಂಟೆಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನಡೆಸಲಾಯಿತು.
ರಾಷ್ಟ್ರ ಜಾಗೃತಿ ಅಭಿಯಾನದ ಅಂಗವಾಗಿ ದೇಶಭಕ್ತಿ ಗೀತೆ, ಶ್ಲೋಕ, ನೃತ್ಯ, ಜಾನಪದ ಗೀತೆ ಮುಂತಾದ ನಾನಾ ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಯಶಸ್ವಿಯಾಗಿ ಆಯೋಜಿಸಲಾಗಿದೆ.
ರಾಷ್ಟ್ರ ಜಾಗೃತಿ ಅಭಿಯಾನದ ಅಂಗವಾಗಿ ನಡೆದ ಚಟುವಟಿಕೆಗಳಲ್ಲಿ ಭಾಗವಹಿಸಿದವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ಚಟುವಟಿಕೆಗಳು ದೇಶಪ್ರೇಮ, ಸಂಸ್ಕೃತಿ, ಭಾಷಾ ಗೌರವಕ್ಕೆ ಉತ್ತೇಜನ ನೀಡಿದವು.
"ಈ ಅಭಿಯಾನದ ಮೂಲಕ ನನಗೆ ನನ್ನ ನಾಡು ಮತ್ತು ಸಂಸ್ಕೃತಿಯ ಬಗ್ಗೆ ಹೊಸ ಅರಿವು ಸಿಕ್ಕಿತು. ಗೀತ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ನಾನು ರಾಷ್ಟ್ರಭಕ್ತಿಯ ದಿಕ್ಕಿನಲ್ಲಿ ನನ್ನ ಹೆಜ್ಜೆ ಇಟ್ಟೆ."
"ವೇದ ಪಠಣ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ನನಗೆ ಭಾರತೀಯ ಪರಂಪರೆಯ ಮೇಲೆ ಹೆಮ್ಮೆ ಪಡಲು ಕಾರಣವಾಯಿತು. ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಮತ್ತು ಗೌರವ ಬೋಧನೆಯ ಅತ್ಯುತ್ತಮ ವೇದಿಕೆ."
"ಜನಪದ ಗೀತೆಗಳ ಸ್ಪರ್ಧೆ ನನ್ನಲ್ಲಿರುವ ಕೌಶಲ್ಯವನ್ನು ಗುರುತಿಸಲು ಸಹಾಯವಾಯಿತು. ಇದು ಗ್ರಾಮೀಣ ಕಲೆಯ ಪರಿಪೋಷಣೆಗೆ ಪ್ರಮುಖ ವೇದಿಕೆ ಎಂದು ನಾನು ಭಾವಿಸುತ್ತೇನೆ."
"ಸಾಮೂಹಿಕ ಗೀತ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಾನು ದೇಶ ಸೇವೆಗೆ ನನ್ನದೇ ಆದ ಕೊಡುಗೆ ನೀಡಿರುವೆ ಎಂಬ ಭಾವನೆ ಮೂಡಿತು. ಇದು ನನ್ನ ಜೀವನದಲ್ಲಿ ಸ್ಮರಣೀಯ ಕ್ಷಣವಾಗಿಯೇ ಉಳಿಯಲಿದೆ."
ರಾಷ್ಟ್ರೀಯ ಜಾಗೃತಿ ಮೂಡಿಸಲು ಹಲವು ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ಸಾಮಾಜಿಕ ಸಂಘಟನೆಗಳು ಈ ಅಭಿಯಾನದಲ್ಲಿ ಸಹಕರಿಸುತ್ತಿವೆ.